true24news.com
ಅಪರಾಧ

ವಿದ್ಯಾರ್ಥಿನಿ ಮೈಮುಟ್ಟಿ ಥಳಿತ: ಶಿಕ್ಷಕನ ವಿರುದ್ಧ ಪೋಕ್ಸೋ ಕೇಸ್

ಹಾಸನ: ಸರಿಯಾಗಿ ಓದಲಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ವಸತಿ ಶಾಲೆಯೊಂದರ ಶಿಕ್ಷಕನೊಬ್ಬ ಬಾಲಕಿಗೆ ಥಳಿಸಿರುವ ಪ್ರಕರಣ ನಡೆದಿದೆ. ಅಪ್ರಾಪ್ತೆಯ ಮೈಮುಟ್ಟಿ ಮನಬಂದಂತೆ ಥಳಿಸಿ ಅನುಚಿತ ವರ್ತನೆ ತೋರಿದ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕ ಶ್ರೀನಿವಾಸ್ ಎಂಬುವರ ವಿರುದ್ಧ ಹಾಸನ ತಾಲೂಕಿನ ಶಾಂತಿಗ್ರಾಮ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.ವಸತಿ ಶಾಲೆಯಲ್ಲಿ ಮಗಳು ಚೆನ್ನಾಗಿ ಓದದೇ ಇದ್ದರೆ ನಮಗೆ ಹೇಳಿದ್ದರೆ ಬುದ್ಧಿವಾದ ಹೇಳುತ್ತಿದ್ದೆವು, ಆದರೆ ಮಗಳಿಗೆ ಎಡಗೈ ಮುರಿಯುವಂತೆ ಹಲ್ಲೆ ಮಾಡಿದ್ದಲ್ಲದೆ ಅನುಚಿತವಾಗಿ ವರ್ತಿಸಿರುವ ಶಿಕ್ಷಕನ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಶಾಂತಿಗ್ರಾಮ ಪೊಲೀಸರಿಗೆ ಪೋಷಕರು ದೂರು ನೀಡಿದ್ದಾರೆ.

Related posts

ಬಾಲಕನ ಮೇಲೆ ದೌರ್ಜನ್ಯ ಆರೋಪ : ಸ್ವಯಂ ಪ್ರೇರಿತ ದೂರು

True News

ಬಾರ್ ಮಾಲೀಕನನ್ನು ಮತ್ತೊಂದು ಬಾರ್ ಸಿಬ್ಬಂದಿಯಿಂದಲೇ ಭೀಕರವಾಗಿ ಮರ್ಡರ್…

True News

ಡಿಕ್ಕಿ ಹೊಡೆದ ಕಾರು; ಕ್ಷಣಾರ್ಧದಲ್ಲಿ ಬೆಂಕಿಗಾಹುತಿ!

True News

Leave a Comment