true24news.com
ಅಪರಾಧ

ಶಿರಾ: ಕೊಡಲಿಯಿಂದ ಕೊಚ್ಚಿ ವ್ಯಕ್ತಿ ಕೊಲೆ..

ಶಿರಾ ತಾಲ್ಲೂಕಿನ ಮಾರನಗೆರೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಿತಿನ್ ತುಳಸಿರಾಮ್ (40) ಎಂಬುವರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ.ನಿತಿನ್ ತುಳಸಿರಾಮ್ ಪತ್ನಿ ಯಶೋದ ಅವರ ಮೊದಲ ಗಂಡನ ಮಗ ಹರೀಶ್ ಕೊಲೆ ಮಾಡಿದ ಆರೋಪಿ. ಮಹಾರಾಷ್ಟ್ರದಿಂದ ಬಂದು ಶಿರಾ ತಾಲ್ಲೂಕಿನ ಮಾರನಗೆರೆ ಗ್ರಾಮದಲ್ಲಿ 3 ವರ್ಷದಿಂದ ಇದ್ದಿಲು ಸುಡುವ ಕೆಲಸ ಮಾಡಿಕೊಂಡಿದ್ದರು.ನಿತಿನ್ ತುಳಸಿರಾಮ್ ಅವರು ಯಶೋದ ಅವರನ್ನು ಎರಡನೇ ಮದುವೆ ಮಾಡಕೊಂಡಿದ್ದರು. ಯಶೋದಗೆ ಸಹ ಇದು ಎರಡನೇ ಮದುವೆಯಾಗಿದ್ದು, ಮೊದಲ ಗಂಡ ರಾಮ್ ವಸಂತ್ ನಾಯ್ಕ ಎಂಬುವರಿಂದ ನರೇಶ್ ಮತ್ತು ಹರೀಶ ಎಂಬ ಇಬ್ಬರು ಮಕ್ಕಳಿದ್ದಾರೆ. ಮಾರನಗೆರೆ ಗ್ರಾಮದಲ್ಲಿ ಶೆಡ್ ಹಾಕಿಕೊಂಡು ವಾಸವಾಗಿದ್ದು ಮಂಗಳವಾರ ರಾತ್ರಿ ನಿತಿನ್ ತುಳಸಿರಾಮ್ ಮತ್ತು ಯಶೋದ ನಡುವೆ ಜಗಳ ನಡೆದಿದೆ. ಆ ಸಮಯದಲ್ಲಿ ಹರೀಶ್ ಕೊಡಲಿಯಿಂದ ಹಲ್ಲೆ ಮಾಡಿ, ಕೊಲೆ ಮಾಡಿದ್ದಾನೆ. ತಾವರೆಕೆರೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Related posts

ಚಿನ್ನದ ಅಂಗಡಿ ಶಟರ್‌ ಒಡೆದು ಕೃತ್ಯ: ₹3 ಕೋಟಿ ಮೌಲ್ಯದ 140 ಕೆ.ಜಿ ಬೆಳ್ಳಿ ಕಳ್ಳತನ

True News

ವೈನ್ ಶಾಪ್ ಸಮೀಪ ಭಾರೀ ಅಗ್ನಿ ಅವಘಡ – ಪೆಟ್ ಸಾರಾಯಿ ಪ್ಯಾಕೆಟ್‌ಗಳಿಗೆ ಬೆಂಕಿ, ಕಾರುಗಳು ಭಸ್ಮ

True News

ಲಾಭದ ಆಮಿಷವೊಡ್ಡಿ 30 ಲ.ರೂ. ವಂಚನೆ..

True News

Leave a Comment