true24news.com
ಅಪರಾಧ ಕರ್ನಾಟಕ ಸುದ್ದಿ

ಕೇಸ್‌ ದಾಖಲಿಸಲು ನಿರಾಕರಣೆ: ಜ್ಞಾನಭಾರತಿ ಪಿಐ ಅಮಾನತು

ಬೆಂಗಳೂರು: ಕರ್ತವ್ಯಲೋಪ ಆರೋಪದ ಮೇರೆಗೆ ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟರ್‌ ಎಂ.ಎಸ್‌.ರವಿ ಅವರನ್ನು ಅಮಾನತುಗೊಳಿಸಿ ಕಮಿಷಮನರ್‌ ಮಂಗಳವಾರ ಆದೇಶಿಸಿದ್ದಾರೆ. 2025ರ ಸೆಪ್ಟಂಬರ್‌ನ ಮೊದಲ ವಾರದಲ್ಲಿ ಅನ್ನಪೂರ್ಣೇಶ್ವರಿನಗರ ನಿವಾಸಿ ದೀಪಕ್‌ ರಾಜ್‌(18) ಎಂಬ ಯುವಕನನ್ನು ಮಲ್ಲತ್ತಹಳ್ಳಿಯಲ್ಲಿ ಹತ್ಯೆಯಾಗಿತ್ತು.ಆದರೆ, ಜ್ಞಾನಭಾರತಿ ಠಾಣಾಧಿಕಾರಿ ರವಿ ಅವರು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಆದರೆ, ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ವೇಳೆ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ದುರ್ಘ‌ಟನೆ ನಡೆದಿದೆ ಎಂಬುದು ಗೊತ್ತಾಗಿ, ಮತ್ತೆ ಇದೇ ಠಾಣೆಗೆ ವರ್ಗಾವಣೆ ಮಾಡಿದ್ದರು.

Related posts

ಬಿಎಂಟಿಸಿ ಬಸ್ ಟೈರ್ ಸ್ಫೋಟ; ಓರ್ವನಿಗೆ ಗಾಯ, ತಪ್ಪಿದ ಭಾರೀ ಅನಾಹುತ!

True News

ಬಾರ್ ಮಾಲೀಕನನ್ನು ಮತ್ತೊಂದು ಬಾರ್ ಸಿಬ್ಬಂದಿಯಿಂದಲೇ ಭೀಕರವಾಗಿ ಮರ್ಡರ್…

True News

ಡಿಕ್ಕಿ ಹೊಡೆದ ಕಾರು; ಕ್ಷಣಾರ್ಧದಲ್ಲಿ ಬೆಂಕಿಗಾಹುತಿ!

True News

Leave a Comment