true24news.com
ಕರ್ನಾಟಕ ಸುದ್ದಿ

ಡ್ರಾಪ್ ನೆಪದಲ್ಲಿ 3 ಲಕ್ಷ ರೂ. ಚಿನ್ನದ ಸರ ದೋಚಿ ಪರಾರಿ..

ಮಹಿಳೆಗೆ ಊರಿಗೆ ಬಿಡುವುದಾಗಿ ಹೇಳಿ ಬೈಕ್ ಮೇಲೆ ಹತ್ತಿಸಿಕೊಂಡ ಅಪರಿಚಿತ ವ್ಯಕ್ತಿ ನಡುರಸ್ತೆಯಲ್ಲೇ ನಿಲ್ಲಿಸಿ ಕೊರಳಲ್ಲಿದ್ದ ಸುಮಾರು 3 ಲಕ್ಷ ರೂ. ಮೌಲ್ಯದ ಚಿನ್ನದ ಸರ ದೋಚಿ ಪರಾರಿಯಾದ ಘಟನೆ ಕಾಗಿನೆಲೆ ಠಾಣೆ ವ್ಯಾಪ್ತಿಯ ತಾಲೂಕಿನ ಕಳಗೊಂಡ-ನಾಗಲಾಪುರ ರಸ್ತೆ ಮಧ್ಯದಲ್ಲಿ ನಡೆದಿದೆ.ಪಟ್ಟಣದ ಬಿಇಒ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ತಾಲೂಕಿನ ಗುಮ್ಮನಹಳ್ಳಿ ಗ್ರಾಮದ ಶಿಕ್ಷಕಿ ರತ್ನಮ್ಮ ಮಹದೇವಪ್ಪ ಬಣಕಾರ ಇತ್ತೀಚೆಗೆ ಬಡ್ತಿ ಮೇರೆಗೆ ತಾಲೂಕಿನ ಕುಮ್ಮೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದರು. ಎಂದಿನಂತೆ ರತ್ನಮ್ಮ ಶಾಲಾ ಅವಧಿ ಬಳಿಕ ಮರಳಿ ತಮ್ಮೂರಿಗೆ ಬರುವುದಕ್ಕಾಗಿ ಕುಮ್ಮೂರ ಕ್ರಾಸ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಅಪರಿಚಿತ ವ್ಯಕ್ತಿ ಗುಮ್ಮನಹಳ್ಳಿಗೆ ಬಿಡುವುದಾಗಿ ಹೇಳಿ ಬೈಕ್ ಮೇಲೆ ಹತ್ತಿಸಿಕೊಂಡು ಸ್ವಲ್ಪ ದೂರ ಸಾಗಿದ ಬಳಿಕ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಕಾಗಿನೆಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಪತ್ನಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ

True News

ನದಿಗೆ ಹಾರಿ ಯುವತಿ ಆತ್ಮಹತ್ಯೆ:

True News

ಲಾಭದ ಆಮಿಷವೊಡ್ಡಿ 30 ಲ.ರೂ. ವಂಚನೆ..

True News

Leave a Comment