true24news.com
ಅಪರಾಧ ಕರ್ನಾಟಕ ಸುದ್ದಿ

ಕೌಟುಂಬಿಕ ಕಲಹ : 10 ತಿಂಗಳ ಮಗುವಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ತಾಯಿ..

ಕೌಟುಂಬಿಕ ಕಲಹದಿಂದ ಬೇಸತ್ತು 27 ವರ್ಷದ ಮಹಿಳೆಯೊಬ್ಬಳು ತನ್ನ 10 ತಿಂಗಳ ಮಗನಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ತಾಯಿ ಮತ್ತು ಮಗು ಸತ್ತಿರುವುದನ್ನು ನೋಡಿ ಮಗುವಿನ ಅಜ್ಜಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಸುಷ್ಮಾ (27) ಎಂದು ಗುರುತಿಸಲಾಗಿದೆ. ಸುಷ್ಮಾ ನಾಲ್ಕು ವರ್ಷಗಳ ಹಿಂದೆ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ಯಶವಂತ್ ರೆಡ್ಡಿ ಎಂಬುವರನ್ನು ವಿವಾಹವಾಗಿದ್ದರು. ಇತ್ತೀಚಿನ ದಿನಗಳಲ್ಲಿ ದಂಪತಿ ಆಗಾಗ ಜಗಳವಾಡುತ್ತಿದ್ದರು ಎಂದು ಕುಟುಂಬದ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಸುಷ್ಮಾ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದಂತೆ ಶಾಪಿಂಗ್‌ಗಾಗಿ ತನ್ನ ತಾಯಿ ಲಲಿತಾ (44) ಅವರ ಮನೆಗೆ ಹೋಗಿದ್ದರು. ಈ ವೇಳೆ ತನ್ನ ಮಗುವಿನೊಂದಿಗೆ ಮತ್ತೊಂದು ಕೋಣೆಗೆ ಹೋಗಿ, ಮಗುವಿಗೆ ವಿಷ ನೀಡಿ, ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ಕೆಲಸ ಮುಗಿಸಿ ವಾಪಸ್‌ ಮನೆಗೆ ಬಂದು ರೂಮ್ ಒಳಗಿನಿಂದ ಲಾಕ್ ಆಗಿರುವುದನ್ನು ಕಂಡು, ಬಾಗಿಲು ಒಡೆದು ನೋಡಿದ್ದಾರೆ. ಈ ವೇಳೆ ಹೆಂಡತಿ ಮತ್ತು ಮಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಗೊತ್ತಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಇಬ್ಬರು ಮೃತಪಟ್ಟಿದ್ದಾರೆ ಎಂದು ಈ ವೇಳೆ ತಿಳಿಸಿದ್ದಾರೆ.

Related posts

​ ಬಿಂಗೀಪುರದಲ್ಲಿ ಘಟನೆ: ಬಾಂಗ್ಲಾ ವಲಸಿಗರು ಖಾಲಿ ಮಾಡಿದ ಶೆಡ್‌ಗಳ ಬಳಿ ಇದ್ದ ಸ್ಕ್ರಾಪ್‌ ಯಾರ್ಡ್‌ಗೆ ಬೆಂಕಿ!!

True News

ಸಾರ್ವಜನಿಕರ ‘ವಾಹನ ತಪಾಸಣೆ’ ವೇಳೆ ದುರ್ನಡತೆ ತೋರುವ ರಾಜ್ಯದ ಟ್ರಾಫಿಕ್ ಪೊಲೀಸರಿಗೆ ಖಡಕ್ ಸೂಚನೆ.!

Admin

ನೌಕರರ ಸಂಘದ ಅಧ್ಯಕ್ಷನ ಮೇಲೆ ಹಲ್ಲೆ ಆರೋಪ : ಶಾಸಕ ಲಕ್ಷಣ ಸವದಿ, ಪುತ್ರನ ವಿರುದ್ಧ ‘FIR’

True News

Leave a Comment