true24news.com
ಅಪರಾಧ

ಬಿಸ್ಕೆಟ್​ ಬಾಕ್ಸ್​ ಕದ್ದವರ ಬಂಧನ…

ಬಿಡದಿ:ಕಂಪನಿಯೊಂದರ ಬಿಸ್ಕೆಟ್​ ಬಾಕ್ಸ್​ಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳ ಪೈಕಿ ಒಬ್ಬನನ್ನು ಬಿಡದಿ ಪೊಲೀಸರು ಬಂಧಿಸಿದ್ದು, ಒಂದು ಲಕ್ಷ ರೂ. ಮೌಲ್ಯದ ಮಾಲನ್ನು ವಶಕ್ಕೆ ಪಡೆದಿದ್ದಾರೆ.ಚಾಲಕ ದೇವರಾಜ್​ ಎಂಬಾತನನ್ನು ಬಂಧಿಸಿದ್ದು, ಇನ್ನೊಬ್ಬ ಆರೋಪಿ ಶಶಿಕುಮಾರ್​ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಅಬ್ಬನಕುಪ್ಪೆ ಗ್ರಾಮದ ಬಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯ ವೇರ್​ಹೌಸ್​ನಿಂದ ಎರಡು ವಾಹನಗಳಲ್ಲಿ 7 ಲಕ್ಷ ರೂ. ಮೌಲ್ಯದ ಬಿಸ್ಕೆಟ್​ ಬಾಕ್ಸ್​ಗಳನ್ನು ಲೋಡ್​ ಮಾಡಿಕೊಂಡು ಹೊಸಕೋಟೆಗೆ ಹೋಗಿದ್ದರು.ಆದರೆ, ನಿಗದಿತ ಸ್ಥಳದಲ್ಲಿ ಅನ್​ ಲೋಡ್​ ಮಾಡದೆ ಬಿಸ್ಕೆಟ್​ ಬಾಕ್ಸ್​ಗಳನ್ನು ಬೇರೊಂದು ವಾಹನದಲ್ಲಿ ತುಂಬಿಕೊಂಡು ಹೊಸಕೋಟೆ ಬಳಿ ವಾಹನಗಳನ್ನು ಬಿಟ್ಟು ಹೋಗಿದ್ದರು. ಈ ಬಗ್ಗೆ ಬಿಡದಿ ಪೊಲೀಸ್​ ಠಾಣೆಯಲ್ಲಿ ಡಿ.6ರಂದು ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಬಿಡದಿ ಠಾಣೆ ಎಸ್​ಐ ಕೇಶವಮೂರ್ತಿ, ಸಿಬ್ಬಂದಿ ಅನ್ವರ್​ ಉಪಸ್ಥಿತರಿದ್ದರು.

Related posts

ವಾಹನ ಸಂಚಾರಕ್ಕೆ ಬ್ರೇಕ್-ಕೇಂದ್ರಕ್ಕೆ ಪತ್ರ ಬರೆಯಲು ಚಿಂತನೆ

True News

ನೌಕರರ ಸಂಘದ ಅಧ್ಯಕ್ಷನ ಮೇಲೆ ಹಲ್ಲೆ ಆರೋಪ : ಶಾಸಕ ಲಕ್ಷಣ ಸವದಿ, ಪುತ್ರನ ವಿರುದ್ಧ ‘FIR’

True News

ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ: ಕೋರ್ಟ್ ತೀರ್ಪು

True News

Leave a Comment