ಬಿಡದಿ:ಕಂಪನಿಯೊಂದರ ಬಿಸ್ಕೆಟ್ ಬಾಕ್ಸ್ಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳ ಪೈಕಿ ಒಬ್ಬನನ್ನು ಬಿಡದಿ ಪೊಲೀಸರು ಬಂಧಿಸಿದ್ದು, ಒಂದು ಲಕ್ಷ ರೂ. ಮೌಲ್ಯದ ಮಾಲನ್ನು ವಶಕ್ಕೆ ಪಡೆದಿದ್ದಾರೆ.ಚಾಲಕ ದೇವರಾಜ್ ಎಂಬಾತನನ್ನು ಬಂಧಿಸಿದ್ದು, ಇನ್ನೊಬ್ಬ ಆರೋಪಿ ಶಶಿಕುಮಾರ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಅಬ್ಬನಕುಪ್ಪೆ ಗ್ರಾಮದ ಬಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯ ವೇರ್ಹೌಸ್ನಿಂದ ಎರಡು ವಾಹನಗಳಲ್ಲಿ 7 ಲಕ್ಷ ರೂ. ಮೌಲ್ಯದ ಬಿಸ್ಕೆಟ್ ಬಾಕ್ಸ್ಗಳನ್ನು ಲೋಡ್ ಮಾಡಿಕೊಂಡು ಹೊಸಕೋಟೆಗೆ ಹೋಗಿದ್ದರು.ಆದರೆ, ನಿಗದಿತ ಸ್ಥಳದಲ್ಲಿ ಅನ್ ಲೋಡ್ ಮಾಡದೆ ಬಿಸ್ಕೆಟ್ ಬಾಕ್ಸ್ಗಳನ್ನು ಬೇರೊಂದು ವಾಹನದಲ್ಲಿ ತುಂಬಿಕೊಂಡು ಹೊಸಕೋಟೆ ಬಳಿ ವಾಹನಗಳನ್ನು ಬಿಟ್ಟು ಹೋಗಿದ್ದರು. ಈ ಬಗ್ಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ಡಿ.6ರಂದು ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಬಿಡದಿ ಠಾಣೆ ಎಸ್ಐ ಕೇಶವಮೂರ್ತಿ, ಸಿಬ್ಬಂದಿ ಅನ್ವರ್ ಉಪಸ್ಥಿತರಿದ್ದರು.
previous post
