true24news.com
ಅಪರಾಧ

ಬಾಂಗ್ಲಾದೇಶಿ ಎಂದು ವಲಸೆ ಕಾರ್ಮಿಕನ ಮೇಲೆ ಹಲ್ಲೆ: ಮೂವರ ಬಂಧನ..

ಕೂಲಿ ಕೆಲಸಕ್ಕಾಗಿ ಜಾರ್ಖಂಡ್‌ದಿಂದ ಮಂಗಳೂರಿಗೆ ಬಂದಿದ್ದ ಕಾರ್ಮಿಕ ದಿಲ್‌ಜಾನ್ ಅನ್ಸಾರಿ ಎಂಬುವವರ ಮೇಲೆ ಹಲ್ಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಸುಧೀರ್ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.ಕೂಳೂರು ನಾರಾಯಣ ಗುರು ಭಜನಾ ಮಂದಿರ ಸಮೀಪದ ನಿವಾಸಿಗಳಾದ ರತೀಶ್ ದಾಸ್‌ ಅಲಿಯಾಸ್ ಲಾಲು (32), ಧನುಷ್ (24) ಹಾಗೂ ಕೂಳೂರು ರಾಯಕಟ್ಟೆಯ ಸಾಗರ್‌ (24) ಬಂಧಿತರು.ಮೋಹನ್ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ‘ಕಾರ್ಮಿಕ ದಿಲ್‌ಜಾನ್ ಅವರನ್ನು ಕೂಳೂರಿನಲ್ಲಿ ಭಾನುವಾರ ಸಂಜೆ ಅಡ್ಡಗಟ್ಟಿ ಅವಾಚ್ಯವಾಗಿ ಬೈದಿದ್ದ ಆರೋಪಿಗಳು, ‘ನೀನು ಬಾಂಗ್ಲಾದೇಶದವ. ಹಿಂದೂನಾ, ಮುಸ್ಲಿಮಾ? ನಿನ್ನಲ್ಲಿರುವ ದಾಖಲೆ ತೋರಿಸು’ ಎಂದು ಪ್ರಶ್ನಿಸಿ, ಆತನ ಮೇಲೆ ಹಲ್ಲೆ ಮಾಡಿದ್ದರು ಎಂದು ಪ್ರಕರಣ ದಾಖಲಾಗಿತ್ತು.

Related posts

ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್, ಮೂವರು ಬಾಲಕರು ಅರೆಸ್ಟ್!

True News

ಸಾರ್ವಜನಿಕರ ‘ವಾಹನ ತಪಾಸಣೆ’ ವೇಳೆ ದುರ್ನಡತೆ ತೋರುವ ರಾಜ್ಯದ ಟ್ರಾಫಿಕ್ ಪೊಲೀಸರಿಗೆ ಖಡಕ್ ಸೂಚನೆ.!

Admin

ಜೀಪು-ಕಾರು ಭೀಕರ ಅಪಘಾತ: ಹೊತ್ತಿ ಉರಿದ ಕಾರು…

True News

Leave a Comment